ಡಬ್ಲ್ಯೂ ಪಿ ಎಲ್ – 2026 ಆವೃತ್ತಿಯಲ್ಲಿ ಆರ್ಸಿಬಿ ತಂಡದ ಪ್ರಾಬಲ್ಯ ಮುಂದುವರೆದಿದೆ
ಡಬ್ಲ್ಯೂ ಪಿ ಎಲ್ 2026 ಆವೃತ್ತಿಯಲ್ಲಿ ಆರ್ಸಿಬಿ ತಂಡದ ಪ್ರಾಬಲ್ಯ ಮುಂದುವರೆದಿದೆ. ಇತರೆ ತಂಡಗಳು ಆರ್‌ಸಿಬಿಗೆ ತೀವ್ರ ಸ್ಪರ್ಧೆಯನ್ನು ಒಡ್ಡುವಲ್ಲಿ ವಿಫಲವಾಗುತ್ತಿವೆ. ಮುಂದುವರೆದು ನೆನ್ನೆ ನಡೆದ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಎರಡನೇ ಹಣಾಹಣಿಯಲ್ಲಿ ಆರ್‌ಸಿಬಿ ಬೌಲರ್ ಗಳು ಅಕ್ಷರಶಃ ಗುಜರಾತ್ ಬ್ಯಾಟಿಂಗ್ ಅನ್ನು ದ್ವಂಸ ಮಾಡಿದರು. ಯಾವುದೇ ಸಮಯದಲ್ಲೂ ಗುಜರಾತ್ ಜೈಂಟ್ಸ್ ತಂಡವು ಬ್ಯಾಟಿಂಗ್ನಲ್ಲಿ ಚೇತರಿಕೆ ಕಾಣಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಗೌತಮಿ ನಾಯ್ಕ್ ರವರ ಸಮಯೋಚಿತ ಬ್ಯಾಟಿಂಗ್ ನ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ಗಳನ್ನು ಕಳೆದುಕೊಂಡು 178 ರನ್ಗಳನ್ನು ಬಾರಿಸಿದರೆ. ಇದಕ್ಕೆ ಉತ್ತರವಾಗಿ ಗುಜರಾತ್ ಜೈಂಟ್ಸ್ ತಂಡದ ಯಾವ ಆಟಗಾರ್ತಿಯರೂ ಸಹ ಸ್ಪರ್ಧಾತ್ಮಕ ಆಟ ಆಡುವಲ್ಲಿ ಸಫಲರಾಗಲಿಲ್ಲ. ನಾಯಕಿ ಆಶ್ ಗಾರ್ಡ್ ನರ್ ಹೊರತುಪಡಿಸಿ ಮತ್ತಾರು ಹೋರಾಟ ಮಾಡದೆ ಇದ್ದಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಗೆಲುವಿನ ಸನಿಹಕ್ಕೆ ಹೋಗುವುದಿರಲಿ, ಕಡೆ ಪಕ್ಷ ಮರ್ಯಾದೆ ಉಳಿಸಿಕೊಂಡರೆ ಸಾಕು ಎನ್ನುವಂತಹ ಪರಿಸ್ಥಿತಿಗೆ ಗುಜರಾತ್ ತಂಡ ಬಂದು ನಿಂತಿತ್ತು. ಗುಜರಾತ್ ನ ಇನ್ನಿಂಗ್ಸ್ ನಲ್ಲಿ ಯಾವ ಸಮಯದಲ್ಲೂ ಸಹ ರನ್ ರೇಟ್ 6 ರನ್ನು ದಾಟಲಿಲ್ಲ. ಇದು ಆರ್‌ಸಿಬಿಯ ಬಿಗಿ ಬೋಲಿಂಗ್ ದಾಳಿ ಎಷ್ಟರಮಟ್ಟಿಗೆ ಇತ್ತು ಎಂಬುದನ್ನು ತಮಗೆ ಸ್ಪಷ್ಟಪಡಿಸುತ್ತದೆ.
ಪ್ರತೀ ಪಂದ್ಯದಲ್ಲೂ ಬೇರೆ-ಬೇರೆ ಆಟಗಾರ್ತಿಯರು ಪ್ಲೇಯರ್ ಆಫ್ ದ ಮ್ಯಾಚ್.
ಇಂದಿನ ಪಂದ್ಯದಲ್ಲಿ ಗೌತಮಿ ನಾಯ್ಕ್ ರವರು ಗುಜರಾತ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ 55 ಎಸೆತಗಳಲ್ಲಿ 73 ರನ್ ಗಳನ್ನು ಪೇರಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದರು.
ಪಂದ್ಯದಿಂದ ಪಂದ್ಯಕ್ಕೆ ಬಲಾಡ್ಯ
ಅಕ್ಷರಶಃ ಚಾಂಪಿಯನ್ ತಂಡದಂತೆ ಹಾಡಿದ ಆರ್ಸಿಬಿ ಆಟಗಾರ್ತಿಯರು ಬ್ಯಾಟಿಂಗ್ ಬೌಲಿಂಗ್ ಬಿಲ್ಡಿಂಗ್ ಮೂರು ಕ್ಷೇತ್ರಗಳಲ್ಲಿ ತಮ್ಮ ನೈಪುಣ್ಯತೆಯನ್ನು ಮೆರೆದರು. ಇದಕ್ಕೆ ಫಲಿತಾಂಶವಾಗಿ ಆರ್‌ಸಿಬಿ ತಂಡವು 61 ರನ್ನುಗಳ ಭರ್ಜರಿ ಜಯದೊಂದಿಗೆ ಮುಂದಿನ ಹಂತಕ್ಕೆ ಕ್ವಾಲಿಫೈ ಆದ ಮೊದಲನೇ ತಂಡವಾಗಿ ಹೊರಹೊಮ್ಮಿತು. ಈ ಬಾರಿಯ ಆವೃತ್ತಿಯಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ಆರ್‌ಸಿಬಿ ತಂಡ ಪಂದ್ಯದಿಂದ ಪಂದ್ಯಕ್ಕೆ ಮುನ್ನುಗ್ಗುತ್ತಿರುವುದು ಎಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ ಅತ್ಯಂತ ಸಂತಸವನ್ನ ಉಂಟು ಮಾಡಿದೆ. ಎಲ್ಲಾ ಆಟಗಾರ್ತಿಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡುತ್ತಿದ್ದು ಮುಂದಿನ ಪಂದ್ಯಗಳಿಗಾಗಿ ಆರ್ಸಿಬಿ ತಂಡಕ್ಕೆ ಶುಭ ಹಾರೈಸುತ್ತಾ ಈ ಲೇಖನವನ್ನು ಮುಗಿಸೋಣ.