ಈ ಬಾರಿಯ ಮಹಿಳಾ ಐಪಿಎಲ್ ನಲ್ಲಿ ಅತ್ಯಂತ ಬಲಿಷ್ಠ ತಂಡವಾಗಿ ಮೂಡಿ ಬರುತ್ತಿರುವ ನಮ್ಮ ಹೆಮ್ಮೆಯ ಆರ್ ಸಿ ಬಿ ತಂಡವು ಪಂದ್ಯದಿಂದ ಪಂದ್ಯಕ್ಕೆ ಎದುರಾಳಿಗಳನ್ನು ಧೂಳೀಪಟ ಮಾಡುತ್ತಾ ಅತ್ಯಂತ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಒಂದು ರೀತಿಯ ಸ್ಟಾರ್ ಆಟಗಾರ್ತಿಯರ ದಂಡನ್ನೇ ಹೊಂದಿರುವ ನಮ್ಮ ತಂಡಕ್ಕೆ ಡ್ಯಾಷಿಂಗ್ ಓಪನರ್ ಗ್ರೇಸ್ ಹ್ಯಾರೀಸ್ ಮತ್ತು ಕ್ಲಾಸಿಕಲ್ ಬ್ಯಾಟರ್ ಸ್ಮೃತಿ ಮಂದನಾ ರವರು ಆರಂಭದಲ್ಲಿ ಆರ್ಭಟಿಸುತ್ತಿದ್ದರೆ ನಂತರದಲ್ಲಿ ಜೊತೆಯಾಗುವ ರಿಚಾ ಘೋಷ್, ಹೆಮಲತಾ, ನದೀನ್ ಡಿ ಕ್ಲರ್ಕ್, ನಮ್ಮ ಹೆಮ್ಮೆಯ ಕನ್ನಡತಿ ಶ್ರೇಯಾಂಕ ಪಾಟೀಲ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕರ್, ಈ ರೀತಿಯಾದ ಆಲ್ ರೌಂಡರ್ ಗಳ ದಂಡನ್ನೇ ಹೊಂದಿದೆ. ಹಾಗೂ ಲಾರೆನ್ ಬೆಲ್ ಎನ್ನುವ ಚಲುವೆ ನಮ್ಮ ತಂಡದ ಬೌಲಿಂಗ್ ಬ್ರಹ್ಮಾಸ್ತ್ರವಾಗಿದ್ದು ಅತ್ಯಂತ ಯಶಸ್ವೀ ಬೌಲರ್ ಆಗಿ ಮುನ್ನಡೆಯುತ್ತಿದ್ದಾರೆ. ಎಲಿಸ್ ಪೆರ್ರಿ ಯವರನ್ನು ಮಿಸ್ ಮಾಡಿಕೊಂಡಿರುವ ನಮ್ಮ ಆರ್.ಸಿ.ಬಿ ತಂಡವು ಯಾವುದೇ ಕೊರತೆಗಳು ಇಲ್ಲವೆಂಬಂತೆ ತಮ್ಮ ಪ್ರದರ್ಶನವನ್ನು ನೀಡುತ್ತಿದೆ. ಇದೇ ರೀತಿಯಾಗಿ ಮುಂದುವರಿದಲ್ಲಿ ಈ ಬಾರಿಯೂ ಕಪ್ ನಮ್ದು ಎನ್ನುವ ಮಾತಿಗೆ ಬೆಲೆ ಸಿಗಲಿದೆ. ಈ ಬಾರಿಯ ಆವೃತ್ತಿಯು 4ನೇ ಯದಾಗಿದ್ದು, ಕಳೆದ ಮೂರೂ ಆವೃತ್ತಿಗಳಲ್ಲಿ 1 ಬಾರಿ ಆರ್.ಸಿ.ಬಿ 2 ಬಾರಿ ಮುಂಬೈ ತಂಡಗಳು ಚಾಂಪಿಯನ್ ಗಳಾಗಿ ಹೊರಹೊಮ್ಮಿವೆ. ಆರ್.ಸಿ.ಬಿ ಯಂತೆಯೇ ಮುಂಬೈ ತಂಡವೂ ಕೂಡ ಅತ್ಯಂತ ಬಲಾಢ್ಯ ವಾಗಿದ್ದು ನಮ್ಮ ದೇಶದ ಮಹಿಳಾ ಕ್ರಿಕೇಟ್ ತಂಡದ ಹೆಮ್ಮೆಯ ನಾಯಕಿ ಹರ್ಮ ನ್ ಪ್ರೀತ್ ಕೌರ್ ರವರ ನಾಯಕತ್ವ ದಲ್ಲಿ ಮುನ್ನುಗ್ಗುತ್ತಿದೆ. ಇನ್ನೂ ಸಮಯೋಚಿತ ಕಲಾ ನೈಪುಣ್ಯತೆಯಿಂದ ಆಟವಾಡುವ ಚಾಂಪಿಯನ್ ಲಿಟಲ್ ಗರ್ಲ್ ಜೆಮೀಮಾ ರಾ್ಡ್ರಿಗ್ಸ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುನ್ನುಗ್ಗುತ್ತಿದ್ದರೆ. ಇನ್ನುಳಿದ ಎರಡು ತಂಡಗಳಾದ ಯು.ಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ವಿದೇಶಿ ನಾಯಕಿಯರ ಮುಂದಾಳತ್ವದಲ್ಲಿ ಆಟವಾಡುತ್ತಿವೆ.
ಪ್ರಸ್ತುತ ಪರಿಸ್ಥಿಯಲ್ಲಿ ಸ್ಮೃತಿ ಮಂದನಾ ನಾಯಕತ್ವದ ಆರ್.ಸಿ.ಬಿ ತಂಡವನ್ನು ಸೋಲಿಸಲು ಎದುರಾಳಿ ತಂಡಗಳು ಬಹಳಷ್ಟು ಕಷ್ಟಪಡಬೇಕಾಗಿದ್ದು, ಮೈಚಳಿ ಬಿಟ್ಟು ಆಡಬೇಕಾಗಿದೆ. ನಮ್ಮ ಹೆಮ್ಮೆಯ ಕನ್ನಡತಿ ಆಲ್ ರೌಂಡರ್ ಶ್ರೇಯಾಂಕ ಪಾಟೀಲ್ ಸ್ವಲ್ಪ ದುಬಾರಿ ಎನಿಸಿದರೂ ಅಪಾಯಕಾರಿ ಸಂದರ್ಭ ಗಳಲ್ಲಿ ವಿಕೇಟ್ ಗಳನ್ನು ತೆಗೆಯುವಲ್ಲಿ ಹಿಂದೆ ಬಿದ್ದಿಲ್ಲ. ಅನುಭವಿ ಆಟಗಾರ್ತಿ ನ್ಯೂಜಿಲೆಂಡ್ ತಂಡದ ಸೂಫಿ ಡಿವೈನ್ ರವರನ್ನು ಕಳೆದುಕೊಂಡು ಸ್ವಲ್ಪ ಮಟ್ಟಿಗೆ ಬೇಜಾರು ಪಡಬೇಕಿದ್ದರೂ ಸಹಾ ಸಮಯೋಚಿತ ಆಟವನ್ನು ಪ್ರದರ್ಶಿಸಿದರೆ ಗೆಲ್ಲುವುದು ಕಷ್ಟವೇನಲ್ಲ.
ನಮ್ಮ ಹೆಮ್ಮೆಯ ಪ್ರದಾನ ಮಂತ್ರಿಗಳ ಆಶಯದಂತೆ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ದೃಡ ಸಂಕಲ್ಪದೊಂದಿಗೆ ನಮ್ಮ ಮನೆಯ ಜಾಗೃತ ಹೆಣ್ಣು ಮಕ್ಕಳಿಗೆ ಕ್ರಿಕೇಟ್ ಸೇರಿದಂತೆ ಅವರಿಗಿಷ್ಟವಾದ ಆಟೋಟಗಳಲ್ಲಿ ಭಾಗವಹಿಸಲು ಮತ್ತು ಪ್ರೋತ್ಸಾಹಿಸಲು ನಾವೆಲ್ಲ ಪಣ ತೊಡಬೇಕಿದೆ.
ಕ್ರೀಡೆಗಳನ್ನು ಆಡುವಂತಹ ನಮ್ಮ ಹೆಮ್ಮೆಯ ಹೆಣ್ಣು ಮಕ್ಕಳ ದೈಹಿಕ ಆರೋಗ್ಯಕ್ಕೆ, ಮಾನಸಿಕ ಆರೋಗ್ಯಕ್ಕೆ, ಅನುಕೂಲವಾಗುವಂತೆ, ಅವರಿಗಿಷ್ಟವಾದ ಸ್ವತಂತ್ರ ಜೀವನವನ್ನು ಜೀವಿಸಲು ಅನುಕೂಲಕರ ವಾತಾವರಣವನ್ನು ನಿರ್ಮಿಸೊಣ ಹಾಗೂ ಪ್ರೋತ್ಸಾಹಿಸೋಣ.
ಮಹಿಳಾ ಕ್ರಿಕೇಟ್ ಗೆ ಸಿಗುತ್ತಿರುವ ಪ್ರೋತ್ಸಾಹ ಹಾಗೂ ಅವಕಾಶಗಳಿಗೆ ಮುಖ್ಯ ಕಾರಣಕರ್ತರಾದ ನಮ್ಮ ಹೆಮ್ಮೆಯ ಐ.ಸಿ.ಸಿ ಅಧ್ಯಕ್ಷರಾದ ಶ್ರೀ ಜೈ ಷಾ ರವರನ್ನು ಈ ಸಂಧರ್ಭದಲ್ಲಿ ಸ್ಮರಿಸುತ್ತಾ ಈ ಲೇಖನವನ್ನು ಕೊನೆಗೊಳಿಸುವ. ಮಹಿಳಾ ಕ್ರಿಕೇಟ್ ನ ಗೋಲ್ಡನ್ ಡೇಸ್ ಶುರುವಾಗಿರುವ ಈ ಸಂಧರ್ಬದಲ್ಲಿ ನಮ್ಮ ಹೆಮ್ಮೆಯ ಎಲ್ಲಾ ಮಹಿಳಾ ಕ್ರಿಕೇಟರ್ಸ್ ಗಳಿಗೆ ಶುಭ ಹಾರೈಸೋಣ.