ಭಾರತೀಯ ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್, ಗ್ರಾಮೀಣ ಢಾಕ್ ಸೇವಕ ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ.
ಅಧಿಸೂಚನೆ ಹೊರಡಿಸುವ ದಿನಾಂಕ: 28-01-2026.
ಆನ್ ಲೈನ್ ಮುಖಾಂತರ ನೋಂದಣಿ ಮಾಡಿಕೊಳ್ಳಲು ಪ್ರಾರಂಭದ ದಿನಾಂಕ 31-01-2026.
ಆನ್-ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 05-02-2026.
ಸಲ್ಲಿಸಿದ ಅರ್ಜಿಯಲ್ಲಿ ಏನಾದರೂ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ನಿಗಧಿಪಡಿಸಿರುವ ದಿನಾಂಕ: 18-02-2026 ಮತ್ತು 19-02-2026.
“ನೋಂದಣಿ ಮಾಡಿಕೊಳ್ಳಲು ನಿಮ್ಮದೇ ಆದ ಒಂದು ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐಡಿ ಯನ್ನು ಹೊಂದಿರಬೇಕಾಗುತ್ತದೆ.”
ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಡಿಯಲ್ಲಿ ಬರುವ ಅಂಚೆ ಇಲಾಖೆಯ ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹಾಗೂ ಗ್ರಾಮೀಣ ಢಾಕ್ ಸೇವಕ ಹುದ್ದೆಗಳಿಗೆ ಆನ್-ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ದಿನಾಂಕ 05/02/2026 ರಿಂದ ಅವಕಾಶವನ್ನು ನೀಡಲಾಗಿದ್ದು, ಸದರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಪ್ರಯತ್ನಿಸ ಬಹುದಾಗಿದೆ.
ಸಾಮಾನ್ಯಅರ್ಹತೆಗಳು
ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು 40 ವರ್ಷ ಮೀರಿರಬಾರದು.
ಸರ್ಕಾರ ನಿಗಧಿಪಡಿಸಿದ ನಿಯಮಾನುಸಾರ ವಯೋಮಿತಿಯ ಸಡಿಲಿಕೆ ಇರುತ್ತದೆ.
10 ನೇ ತರಗತಿಯ ತೇರ್ಗ ಡೆಯಾಗಿರಬೇಕು ಮತ್ತು ಸ್ಥಳೀಯ ಬಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಮೂಲ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಸೈಕಲ್ ಓಡಿಸಲು ಬರಬೇಕು. ಹಾಗೂ ಅದಕ್ಕೆ ಬೇಕಾದ ಜ್ಞಾನವನ್ನು ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆಯ ಮಾನದಂಡಗಳು
10 ನೇ ತರಗತಿಯಲ್ಲಿ ಪಡೆದುಕೊಂಡಿರುವ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಯಾವುದೇ ರೀತಿಯ ಲಿಖಿತ ಪರೀಕ್ಷೆಗಳು ಇರುವುದಿಲ್ಲ, ಮತ್ತು ಇಂಟರ್ ವ್ಯೂವ್ ಗಳು ಇರುವುದಿಲ್ಲ.
ಮೀಸಲಾತಿ ಮತ್ತು ವಯೋಮಿತಿ ಸಡಿಲಿಕೆ ನಿಯಮಾನುಸಾರ ಅನುಸರಿಸಲಾಗುತ್ತದೆ.
ದಾಖಲಾತಿಗಳ ಪರಿಶೀಲನೆಯಲ್ಲಿ ತಮ್ಮ 10 ನೇ ತರಗತಿಯ ಅಂಕಪಟ್ಟಿಯನ್ನು ಹಾಗೂ ಸರ್ಕಾರದಿಂದ ನೀಡಲಾಗಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸುವುದು.
ಆರೋಗ್ಯವಂತ ದೇಹವನ್ನು ಹೊಂದಿರುವ ಕುರಿತಾದ ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸುವುದು.
ವೇತನ ಸೌಲಭ್ಯ
ಬ್ರಾಂಚ್ ಪೋಸ್ಟ್ ಮಾಸ್ಟರ್
12,000-29,380
ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್
10,000-24,470
ಗ್ರಾಮೀಣ ಢಾಕ್ ಸೇವಕ
10,000-24,470
ಕಳೆದ ಬಾರಿಯ ಪಲಿತಾಂಶವನ್ನು ಅವಲೋಕಿಸಿದಾಗ ತಿಳಿದ ವಿಚಾರವೆಂದರೆ, ನೀವು 10 ನೇ ತರಗತಿಯಲ್ಲಿ 90% ಗಿಂತ ಹೆಚ್ಚಿನಅಂಕಗಳನ್ನು ಗಳಿಸಿದ್ದರೆ ಮಾತ್ರ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂಬ ಕಹಿ ಸತ್ಯವನ್ನು ಮರೆಯಬೇಡಿ.
ಶೇ 80 ಕ್ಕಿಂತ ಕಡಿಮೆ ಫಲಿತಾಂಶವನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ.
ಅಧಿಸೂಚನೆ ಹೊರಡಿಸುವ ದಿನಾಂಕ: 28-01-2026.
ಆನ್ ಲೈನ್ ಮುಖಾಂತರ ನೋಂದಣಿ ಮಾಡಿಕೊಳ್ಳಲು ಪ್ರಾರಂಭದ ದಿನಾಂಕ 31-01-2026.
ಆನ್-ಲೈನ್ ಮುಖಾಂತರಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 05-02-2026.
ಸಲ್ಲಿಸಿದ ಅರ್ಜಿಯಲ್ಲಿ ಏನಾದರೂ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ನಿಗಧಿಪಡಿಸಿರುವ ದಿನಾಂಕ: 18-02-2026 ಮತ್ತು 19-02-2026.
ಆನ್-ಲೈನ್ ಮುಖಾಂತರಅರ್ಜಿ ಸಲ್ಲಿಸಲು ಹಾಗೂಹೆಚ್ಚಿನ ವಿವರಗಳಿಗಾಗಿ, ಈ ಕೆಳಕಾಣಿಸಿದ ವೆಬ್ ಸೈಟ್ ನ್ನು ಸಂಪರ್ಕಿಸಿ. ದಿನಾಂಕ:28-01-2026 ರ ನಂತರ.