ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ 4ನೇ ಟಿ-20 ಪಂದ್ಯವನ್ನು ಭರ್ಜರಿಯಾಗಿ ಗೆದ್ದು, ಮರ್ಯಾದೆ ಉಳಿಸಿಕೊಂಡ ನ್ಯೂಜಿಲೆಂಡ್.

ಚಾಂಪಿಯನ್ ಬ್ಯಾಟರ್ ಗಳಂತೆ ಬ್ಯಾಟ್ ಬೀಸಿದ ಟಿಮ್ ಸೈಫರ್ಟ್ ಮತ್ತು ಡರೇಲ್ ಮಿಚೆಲ್,

ಟಿಮ್ ಸೈಫರ್ಟ್ ರವರು ಕೇವಲ 36 ಎಸೆತಗಳಲ್ಲಿ 62 ರನ್ ಗಳನ್ನು ಗಳಿಸಿದರು, ಡಿವೈನ ಕಾನ್ವೆ 23 ಎಸೆತಗಳಲ್ಲಿ 44 ರನ್ ಗಳನ್ನು ಗಳಿಸಿದರು. ಕಡೆಯದಾಗಿ ಡರೇಲ್ ಮಿಚೆಲ್ ರವರ 39 ರನ್ ಗಳೊಂದಿಗೆ ನಿಗಧಿತ 20 ಓವರ್ ಗಳಲ್ಲಿ 7 ವಿಕೇಟ್ ನಷ್ಟಕ್ಕೆ 215 ರನ್ ಗಳನ್ನು ಗಳಿಸಿತು.

ಅರ್ಶದೀಪ್ ಸಿಂಗ್ ಮತ್ತು ಕುಲ್ದೀಪ್ ಯಾದವ್ ರವರು ತಲಾ 2 ವಿಕೇಟ್ ಗಳನ್ನು ಪಡೆದುಕೊಂಡರು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಅಂಕಣಕ್ಕಿಳಿದ ನ್ಯೂಜಿಲೆಂಡ್ ಬ್ಯಾಟರ್ ಗಳು, ಪವರ್ ಪ್ಲೇ ನಲ್ಲಿ ಭಾರತದ ಬೌಲರ್ ಗಳ ಮೇಲೆ ಆಕ್ರಮಣ ಕಾರಿ ಆಟವನ್ನು ಪ್ರಾರಂಭಿಸಿದರು. ಪವರ್ ಪ್ಲೇನ ಅಂತ್ಯಕ್ಕೆ ನ್ಯೂಜಿಲೆಂಡ್ ನ ಒಟ್ಟು ಮೊತ್ತ 71 ರನ್ ಗಳು ಯಾವುದೇ ವಿಕೇಟ್ ನಷ್ಟವಿಲ್ಲದೆ. ಟಿಮ್ ಸೈಫರ್ಟ್ ರವರು ಭಾರತದ ಬೌಲರ್ ಗಳನ್ನು ಅಕ್ಷರಶಃ ಬೆಂಡೆತ್ತಿದರು. ಭಾರತದ ಬೌಲರ್ ಗಳು ನ್ಯೂಜಿಲೆಂಡ್ ಬ್ಯಾಟರ್ ಗಳ ಮೇಲೆ ತೀವ್ರ ತರನಾಗಿ ಆಕ್ರಮಣ ಕಾರಿ ಬೌಲಿಂಗ್ ಪ್ರದರ್ಶನವನ್ನು ಮಾಡುವಲ್ಲಿ ವಿಫಲವಾದರು. ನಾಯಕನ ಲೆಕ್ಕಾಚಾರದಂತೆ ಬೌಲಿಂಗ್ ಮಾಡಲಿಲ್ಲ.

ಭಾರತದ ಬ್ಯಾಟಿಂಗ್ ನಲ್ಲಿ ಮಿಂಚಿದ ಶಿವಂ ದುಬೆ,

        ಇನ್ನಿಂಗ್ಸ್ ನ ಮೊದಲನೇ ಬಾಲ್ ನಲ್ಲಿ ಅಭಿಷೇಕ್ ಶರ್ಮಾ ನ ವಿಕೇಟ್ ಕಳೆದುಕೊಂಡು ಇನ್ನಿಂಗ್ಸ್ ಆರಂಭಿಸಿದ ಭಾರತದ ಬ್ಯಾಟರ್ ಗಳು ಕಿವೀಸ್ ಬೌಲರ್ ಗಳನ್ನು ಸಮರ್ಥ ವಾಗಿ ಎದುರಿಸುವಲ್ಲಿ ವಿಫಲವಾದರು. ಅಕ್ಷರಶಃ ಬ್ಯಾಟರ್ ಗಳ ಪೆವಿಲಿಯನ್ ಪರೇಡ್ ನಡೆಸಿದಂತೆ ಭಾಸವಾಗಿತ್ತಿತ್ತು. ಪವರ್ ಪ್ಲೇನ ಅಂತ್ಯಕ್ಕೆ ಭಾರತದ ಒಟ್ಟು ಮೊತ್ತ 53 ರನ್ ಗಳು 2 ವಿಕೇಟ್ ನಷ್ಟಕ್ಕೆ. ಸಮಯೋಚಿತ ಆಟವಾಡಿದ ರಿಂಕು ಸಿಂಗ್  39 ರನ್ ಗಳಿಸಿದರೆ, ಕಿವೀಸ್ ಬೌಲರ್ ಗಳ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಶಿವಂ ದುಬೆ ರವರು ಕೇವಲ 22 ಎಸೆತಗಳಲ್ಲಿ 7 ಸಿಕ್ಸರ್ ಗಳನ್ನು ಒಳಗೊಂಡ 65 ರನ್ ಗಳನ್ನು ಗಳಿಸಿ ದುರಾದೃಷ್ಟಕರ ರನ್ ಔಟ್ ಗೆ ಬಲಿಯಾದರು. ಕ್ರೀಡಾಂಗಣದ ಮೂಲೆ ಮೂಲೆಗೂ ಸಿಕ್ಸ್ ರ್ ಗಳನ್ನು ಚೆಂಡಾಡಿದ ಶಿವಂ ದುಬೆ  ಬೌಂಡರಿ ಸಿಕ್ಸರ್ ಗಳ ಸುರಿ ಮಳೆಯನ್ನೇ ಸುರಿಸಿದರು.

ಮತ್ತೊಮ್ಮೆ ವಿಫಲವಾದ ಸಂಜು ಸ್ಯಾಮ್ಸನ್.

ಸಿಕ್ಕ ಅವಕಾಶವನ್ನು ಮತ್ತೊಮ್ಮೆ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾಧ ವಿಕೇಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ 15 ಎಸೆತಗಳಲ್ಲಿ 24 ರನ್ ಗಳಿಸಿ ಮಿಸ್ಟ್ರಿ ಸ್ಪಿನ್ನೆರ್ ಮಿಚೆಲ್ ಸ್ಯಾಂಟ್ನರ್ ರವರಿಗೆ ಕ್ಲೀನ್ ಬೌಲ್ಡ್ ಆದರು.

        ಅಂತಿಮವಾಗಿ ಭಾರತ ತಂಡವು ಕೇವಲ 18.4 ಓವರ್ ಗಳಲ್ಲಿ ಎಲ್ಲಾ ವಿಕೇಟ್ ಗಳನ್ನು ಕಳೆದುಕೊಂಡು ಕೇವಲ 165 ರನ್ ಗಳನ್ನು ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಮಿಚೆಲ್ ಸ್ಯಾಂಟ್ನರ್ ಬೆಸ್ಟ್ ಬೌಲಿಂಗ್ ಮಾಡಿ 4 ಓವರ್ ಗಳಲ್ಲಿ 26 ರನ್ ನೀಡಿ 3 ವಿಕೇಟ್ ಗಳನ್ನು ಪಡೆದುಕೊಂಡರು.