ಫೈನಲಿ ಯುಪಿ ವಾರಿಯರ್ಸ್ ವಿನ್
ಸತತ ಮೂರು ಪಂದ್ಯಗಳ ಸೋಲಿನ ನಂತರ ಡಬ್ಲ್ಯೂ ಪಿ ಎಲ್ 2026 ನಲ್ಲಿ ಯುಪಿ ವಾರಿಯರ್ಸ್ ತಂಡ ಈ ಆವೃತ್ತಿಯ ಮೊದಲನೇ ಗೆಲುವನ್ನು ಪಡೆದುಕೊಂಡಿತು. ನೆನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 Overs 161 ರನ್ ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಮುಂಬೈ ಪರ ಯಶಸ್ವಿ ಬ್ಯಾಟರಾಗಿ ಸೀವರ್ ಬ್ರಂಟ್ ರವರು ಮತ್ತೊಮ್ಮೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಆಡಿದರು ಅವರು 64 ರನ್ನುಗಳನ್ನು ಗಳಿಸಿದರು ನಂತರ ಇದಕ್ಕುತ್ತರವಾಗಿ ಯುಪಿ ವಾರಿಯರ್ ತಂಡ ಕೇವಲ 18.1ವರ್ಗಳಲ್ಲಿ ಕೇವಲ ಮೂರು ವಿಕೆಟ್ಗಳನ್ನು ಕಳೆದುಕೊಂಡು ಏಳು ವಿಕೆಟ್ಗಳ ಭರ್ಜರಿ ಜಯವನ್ನು ಸಾಧಿಸಿತು
ಇಂದಿನ ಪಂದ್ಯದ ಆಕರ್ಷಣೆ
ಹರ್ಲೀನ್ ಡಿಯೋಲ್ ರವರು ಅತ್ಯಂತ ಕ್ಲಾಸಿಕಲ್ ಹೊಡೆತಗಳಿಂದ ಪ್ರೇಕ್ಷಕರ ಕಣ್ಮನ ಸೆಳೆಯುವಂತಹ ಆಟವಾಡಿದರು. ಅವರು ಕೇವಲ 42 ಎಸೆತಗಳಲ್ಲಿ ಅತ್ಯಾಕರ್ಷಕ 11 ಫೋರ್ ಗಳನ್ನು ಒಳಗೊಂಡ 64 ರನ್ನುಗಳನ್ನು ಗಳಿಸಿ ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.
ರಿಟೈರ್ಡ್ ಔಟ್ ನಿಂದ ಪ್ಲೇಯರ್ ಆಫ್ ದಮ್ಯಾಚ್ ವರೆಗೆ
ಹರ್ಲೀನ್ ಡಿಯೋಲ್ ರವರು ಕಳೆದ ಪಂದ್ಯದಲ್ಲಿ ಕೋಚ್ ಅಭಿಷೇಕ್ ನಾಯರ್ ರವರ ಸೂಚನೆಯಂತೆ ರಿಟೈರ್ಡ್ ಔಟ್ ಆಗಿ ನಂತರದ ಆಟಗಾರ್ತಿ ಟ್ರೈಯಾನ್ ರವರಿಗೆ ಬ್ಯಾಟಿಂಗ್ ಮಾಡಲು ಅವಕಾಶವನ್ನು ನೀಡಿದ್ದರು ಅದೂ ಸಹ ತಮ್ಮ ವೈಯಕ್ತಿಕ ಸ್ಕೋರ್ 47 ರನ್ ಗಳಾಗಿದ್ದಾಗ ಕೋಚ್ ರವರ ಈ ರೀತಿಯ ನಿರ್ಣಯ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿಯನ್ನುಂಟು ಮಾಡಿತ್ತು. ಆದರೂ ಸಹ ಕಳೆದ ಪಂದ್ಯದ ಕಹಿ ಸನ್ನಿವೇಶವನ್ನು ಮರೆತು ನೆನ್ನೆಯ ಪಂದ್ಯದಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲ್ಲಿಸಿ ನಾಟ್ ಔಟ್ ಆಗಿ ಉಳಿದರು. ಹಾಗೂ ಅತ್ಯಂತ ಯಶಸ್ವಿ ಬ್ಯಾಟರಾಗಿ ಪ್ಲೇಯರ್ ಆಫ್ ದಿ ಮ್ಯಾಚ್ ಪುರಸ್ಕಾರಕ್ಕೆ ಭಾಜನರಾದರು. ಇದು ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಆಗಿತ್ತು. ಏನೇ ಆದರೂ ಯಾಕೆ ಆದರೂ ಅಂದಿನ ಪರಿಸ್ಥಿತಿಯಗೆ ಪೂರಕವಾಗಿ ಕೋಚ್ ರವರು ಆಡಿಸಿದರೇ ಹೊರತು ಮತ್ತೇನಲ್ಲ. ನಿಮ್ಮ ಆಟಕ್ಕೆ ಶಭಾಷ್ ಹೇಳುತ್ತಾ ಮುಂದಿನ ಪಂದ್ಯಗಳಿಗೆ ಶುಭ ಹಾರೈಸುತ್ತಾ ನಮ್ಮ ಈ ಲೇಖನವನ್ನು ಮುಗಿಸೋಣ ಶುಭವಾಗಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ.
ಏನೇ ಆದರೂ ಸೂಫಿ ಎಕಲ್ಸ್ಟನ್, ಟ್ರಯಾನ್, ಮೆಗ್ಲಾನಿಂಗ್ ರವರಂತಹ ದಿಗ್ಗಜ ಆಟಗಾರರನ್ನು ಹೊಂದಿರುವ ಯುಪಿ ವಾರಿಯರ್ಸ್ ತಂಡ ಈ ಬಾರಿಯ ಡಬ್ಲ್ಯೂ ಪಿ ಎಲ್ ನಲ್ಲಿ ಗೆಲುವು ಸಾಧಿಸಲು ತುಂಬಾ ತಿಣುಕಾಡುತ್ತಿದೆ ಮುಂದಿನ ಪಂದ್ಯಗಳಿಗೆ ಈ ತಂಡಕ್ಕೆ ಶುಭ ಹಾರೈಸೋಣ.