ಡಬ್ಲ್ಯೂ ಪಿ ಎಲ್ 2026 ಆವೃತ್ತಿಯ 13ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ.
ಡಬ್ಲ್ಯೂ ಪಿ ಎಲ್ 2026 ಆವೃತ್ತಿಯ 13ನೇ ಪಂದ್ಯದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಲಿದ್ದು, ಅತ್ಯಂತ ರಣರೋಚಕ ಕಾದಾಟವನ್ನು ವೀಕ್ಷಿಸಬಹುದಾಗಿದೆ. ಮುಂಬೈ ಇಂಡಿಯನ್ಸ್ ತಂಡವು ತಾನು ಆಡಿರುವ 5 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತು ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕುಳಿತಿದೆ. ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಾನು ಹಾಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತು ಒಂದು ಪಂದ್ಯವನ್ನು ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಅತ್ಯಂತ ಕಡೆಯ ಸ್ಥಾನ ಅಂದರೆ ಐದನೇ ಸ್ಥಾನದಲ್ಲಿ ಕುಳಿತಿದೆ. ಇಂದಿನ ಪಂದ್ಯವು ಎರಡು ತಂಡಗಳಿಗೆ ಬಹಳ ಮುಖ್ಯವಾದಂತಹ ಪಂದ್ಯವಾಗಿದ್ದು ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.
ಮುಂಬೈ ಇಂಡಿಯನ್ಸ್ ತಂಡ ನಾಯಕಿ ಹರ್ಮಾನ್ ಪ್ರೀತ್ ಕೌರ್ ರವರ ಮುಂದಾಳತ್ವದಲ್ಲಿ ಯಶಸ್ವಿ ತಂಡವಾಗಿ ಮುನ್ನುಗ್ಗುತ್ತಿದ್ದು, ಅತ್ಯಂತ ಬಲಾಢ್ಯ ಪ್ರತಿಭೆಗಳಾದ.ಮ್ಯಾಟ್ ಸಿವರ್ ಬ್ರಂಟ್, ಶಬ್ನಮ್ ಇಸ್ಮಾಯಿಲ್, ನಿಕೋಲಾ ಕ್ಯಾರಿ, ಅಮೇಲಾಕರ್, ಅಮನ್ ಜೋತ್ ಕೌರ್ ರಂತಹ ದಿಗ್ಗಜ ಆಟಗಾರರನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ತಂಡವು ಮೇಲ್ನೋಟಕ್ಕೆ ಡೆಲ್ಲಿ ಕ್ಯಾಪಿಟಲ್ ತಂಡಕ್ಕಿಂತ ಪ್ರಬಲವಾಗಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ ತಂಡ ನಾಯಕಿ ಜಮೀಮಾ ರಾಡ್ರಿಕ್ಸ್ ಶಫಾಲಿವರ್ಮ ಲೋರಾ ವಲ್ಫಾಟ್ ರವರಂತಹ ಸ್ಟಾರ್ ಆಟಗಾರರನ್ನು ಹೊಂದಿದೆ. ಇವರೆಲ್ಲ ಸಮಯೋಚಿತ ಆಟವನ್ನು ಪ್ರದರ್ಶಿಸಿದರೆ ಗೆಲುವು ಅಸಾಧ್ಯವೇನಲ್ಲ. ಕೊನೆಯದಾಗಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದನ್ನ ಕಾದು ನೋಡೋಣ, ಈ ಎರಡೂ ತಂಡಗಳಿಗೆ ಶುಭ ಹಾರೈಸುತ್ತಾ, ಈ ಲೇಖನವನ್ನು ಮುಗಿಸೋಣ