ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ 3ನೇ ಟಿ-20 ಪಂದ್ಯವನ್ನು ಗೆದ್ದು ಸರಣಿ ಜಯವನ್ನು ತನ್ನದಾಗಿಸಿಕೊಂಡ ಭಾರತ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಅಂಕಣಕ್ಕಿಳಿದ ನ್ಯೂಜಿಲೆಂಡ್ ಬ್ಯಾಟರ್ ಗಳು, ಪವರ್ ಪ್ಲೇ ನಲ್ಲಿ ಅಷ್ಟೇನೂ ಆಕ್ರಮಣ ಕಾರಿ ಆಟವಾಡಲಿಲ್ಲ. ನ್ಯೂಜಿಲೆಂಡ್ ಬ್ಯಾಟರ್ ಗಳು ಪವರ್ ಪ್ಲೇ ನಲ್ಲೇ ತನ್ನ ಅತ್ಯಮೂಲ್ಯ ವಿಕೇಟ್ ಗಳಾದ ರಚಿನ್ ರವೀಂದ್ರ, ಡಿವೈನ್ ಕಾನ್ವೆ, ಮತ್ತು ಸೈಫರ್ಟ್ ರವರನ್ನು ಕಳೆದುಕೊಂಡು ಕೇವಲ 36 ರನ್ ಗಳನ್ನು ಗಳಿಸಿತ್ತು. ಭಾರತದ ಬೌಲರ್ ಗಳು ನ್ಯೂಜಿಲೆಂಡ್ ಬ್ಯಾಟರ್ ಗಳ ಮೇಲೆ ತೀವ್ರ ತರನಾಗಿ ಆಕ್ರಮಣ ಕಾರಿ ಬೌಲಿಂಗ್ ಪ್ರದರ್ಶನವನ್ನು ಮಾಡಿದರು. ಹರ್ಶಿತ್ ರಾಣ, ಹಾರ್ದಿಕ್ ಪಾಂಡ್ಯ , ಜಸ್ಪ್ರೀತ್ ಬುಮ್ರಾ ತಲಾ ಒಂದೊಂದು ವಿಕೇಟ್ ಗಳನ್ನು ಪವರ್ ಪ್ಲೇ ನಲ್ಲೇ ಪಡೆದುಕೊಂಡಿದ್ದರು. ಇದಾದ ನಂತರ ಬಹಳ ವರ್ಷಗಳ ಕಾಯುವಿಕೆಯ ನಂತರ ಬೌಲಿಂಗ್ ಮಾಡಲು ಬಂದ ರವಿ ಬಿಷ್ಣೋಯಿ ರವರು ಅವರ ಸ್ಪೆಲ್ ನ ಮೊದಲನೇ ಓವರ್ ಹಾಗೂ ಇನ್ನಿಂಗ್ಸ್ ನ ಐದನೇ ಓವರ್ ನಲ್ಲಿ ಅಕ್ಷರಶಃ ಬೆಂಕಿಯುಂಡೆಯಂತೆ ಬೌಲಿಂಗ್ ಮಾಡಿ ಕೇವಲ ಒಂದು ರನ್ ಮಾತ್ರ ಬಿಟ್ಟುಕೊಟ್ಟರು.

ಚಾಂಪಿಯನ್ ಬೌಲರ್ ಜಸ್ಪ್ರೀತ್ ಬುಮ್ರಾ. ಮತ್ತೊಮ್ಮೆ ಅದ್ಬುತ ದಾಳಿ.

ಬುಮ್ರಾ ತಮ್ಮ ಕೋಟಾದ ಮೊದಲನೇ ಓವರ್ ನ ಹಾಗೂ ಇನ್ನಿಂಗ್ಸ್ ನ ಆರನೇ ಓವರ್ ನ ಮೊದಲನೇ ಬಾಲ್ ನಲ್ಲಿ ಸೈಫರ್ಟ್ ರವರನ್ನು ಕ್ಲೀನ್ ಬೌಲ್ಡ್ ಮಾಡಿದ ರೀತಿ ಅದ್ಬುತವಾಗಿತ್ತು. ಹಾಗೂ 18ನೇ ಓವರ್ ನ 2ನೇ ಬಾಲ್ ನಲ್ಲಿ ಜೇಮಿಸನ್ ರವರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಸೆಟಲ್ ಬ್ಯಾಟರ್ ಗಳನ್ನು ಪೆವಿಲಿಯನ್ ಗೆ ಕಳುಹಿಸಿದ ರವಿ ಬಿಷ್ಣೋಯಿ.

 

ರವಿ ಬಿಷ್ಣೋಯಿ ರವರು ಚಾಪ್ ಮನ್ (32) ಹಾಗೂ ಗ್ಲೆನ್ ಫಿಲಿಪ್ (48)ರವರನ್ನು ಸರಿಯಾದ ಸಮಯದಲ್ಲಿ ತಮ್ಮ ಕೌಶಲ್ಯ ಯುತ ಬೌಲಿಂಗ್ ದಾಳಿಯಿಂದ ಪೆವಿಲಿಯನ್ ಗೆ ಹಿಂತಿರುಗಿಸಿದರು. ಅಂತಿಮವಾಗಿ ನಿಗಧಿತ 20 ಓವರ್ ಗಳಲ್ಲಿ ನ್ಯೂಜಿಲೆಂಡ್ ತಂಡವು 153 ಗಳಿಸಿ 9 ವಿಕೇಟ್ ಗಳನ್ನು ಕಳೆದುಕೊಂಡಿತು.

ಬುಮ್ರಾ 3 ವಿಕೇಟ್ ಗಳನ್ನು ಪಡೆದರೆ, ರವಿ ಬಿಷ್ಣೋಯಿ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೇಟ್ ಗಳನ್ನು ಪಡೆದುಕೊಂಡರು.

ಅಭಿಷೇಕ್ ಶರ್ಮಾ (68) ಕೇವಲ 14 ಬಾಲ್ ಗಳಲ್ಲಿ 50 ರನ್ ಗಳನ್ನು ಚಚ್ಚಿದರು.

ದಾಖಲೆಯ 50 ರನ್ ಗಳನ್ನು ಬಾರಿಸಿದ ಅಭಿಷೇಕ್ ಶರ್ಮಾ(68)  2ನೇ  ಅತೀ ವೇಗದ ಅರ್ಧ ಶತಕವನ್ನು ಬಾರಿಸಿದರು.

ನಾಯಕನಿಗೆ ತಕ್ಕ ಆಟವಾಡಿದ ಸೂರ್ಯ ಕುಮಾರ್ ಯಾದವ್ ರವರು ಕೇವಲ 26 ಬಾಲ್ ಗಳಲ್ಲಿ 57 ರನ್ ಗಳನ್ನು ಬಾರಿಸಿ ಭಾರತದ ಗೆಲುವಿನಲ್ಲಿ ಅತ್ಯಮೂಲ್ಯ ಕಾಣಿಕೆಯನ್ನು ನೀಡಿದರು.

ಭಾರತದ ಬ್ಯಾಟಿಂಗ್ ನಲ್ಲಿ ಭರ್ಜ ರಿ ಆರಂಭ.

ಇನ್ನಿಂಗ್ಸ್ ನ ಮೊದಲನೇ ಬಾಲ್ ನಲ್ಲಿ ಸಂಜು ಸ್ಯಾಮ್ಸನ್ ನ ವಿಕೇಟ್ ಕಳೆದುಕೊಂಡು ಇನ್ನಿಂಗ್ಸ್ ಆರಂಭಿಸಿದ ಭಾರತದ ಬ್ಯಾಟರ್ ಗಳು ಕಿವೀಸ್ ಬೌಲರ್ ಗಳನ್ನು ಮನ ಬಂದಂತೆ ಬೆಂಡೆತ್ತಿದರು. ಕ್ರೀಡಾಂಗಣದ ಮೂಲೆ ಮೂಲೆಗೂ ಸಿಕ್ಸ್ ರ್ ಗಳನ್ನು ಚೆಂಡಾಡಿದ ಭಾರತದ ಬ್ಯಾಟರ್ ಗಳು  ಬೌಂಡರಿ ಸಿಕ್ಸರ್ ಗಳ ಸುರಿ ಮಳೆಯನ್ನೇ ಸುರಿಸಿದರು. ಪವರ್ ಪ್ಲೇ ನ ಮುಕ್ತಾಯಕ್ಕೆ ಭಾರತದ ಒಟ್ಟು ಮೊತ್ತ 94 ರನ್ ಗಳು ಎರಡು ವಿಕೇಟ್ ನಷ್ಟಕ್ಕೆ.

ಅಂತಿಮವಾಗಿ ಕೇವಲ 10 ಓವರ್ ಗಳಲ್ಲಿ ಎರಡು ವಿಕೇಟ್ ಗಳನ್ನು ಕಳೆದುಕೊಂಡು 157 ರನ್ ಗಳನ್ನು ಗಳಿಸಿ ಗೆಲುವಿನ ನಗೆ ಬೀರಿದ ಭಾರತದ ಕ್ರಿಕೇಟ್ ಕಲಿಗಳು. ಒಂದು ರೀತಿಯ ಹೈಲೈಟ್ಸ್ ನ್ನು ನೋಡಿದ ರೀತಿಯಲ್ಲಿ ನಮ್ಮಲ್ಲೆರಿಗೂ ಭಾಸವಾಗಿದ್ದು ಅತಿಶಯೋಕ್ತಿಯಲ್ಲ. ಒಟ್ಟಾರೆಯಾಗಿ ಭಾರತೀಯರಿಗೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನ ರಸದೌತಣ. ನ್ಯೂಜಿಲೆಂಡ್ ಬೌಲಿಂಗ್ ನ ಧೂಳೀಪಟವಾಗಿದ್ದು ಸ್ಪಷ್ಟವಾಗಿತ್ತು.