ಆರಂಭಿಕ ಸ್ಪೋಟಕ ಬ್ಯಾಟರ ಅಭಿಷೇಕ್ ಶರ್ಮ ರವರ ಬಿರುಗಾಳಿ ಬ್ಯಾಟಿಂಗ್ ನಾ ನೆರವಿನಿಂದ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು ಮೊದಲನೇ ಟಿ20 ಪಂದ್ಯದಲ್ಲಿ 48 ರನ್ಗಳ ಅಂತರದಿಂದ ಸೋಲಿಸಿ ಸರಣಿಯಲ್ಲಿ ಒಂದು ಸೊನ್ನೆ ಮುನ್ನಡೆಯನ್ನು ಪಡೆದುಕೊಂಡಿದೆ ಸ್ಟಾರ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಬ್ಯಾಟ್ಸ್ಮನ್ ಗಳು ನ್ಯೂಜಿಲೆಂಡ್ ಬೌಲಿಂಗ್ ದಾಳಿಯನ್ನು ಮನಬಂದಂತೆ ದಂಡಿಸಿದರು ಏಕದಿನ ಸರಣಿಯ ಸೋಲಿನ ಕಹಿ ನೆನಪು ಮರೆಯುವಂತೆ ಬ್ಯಾಟ್ ಬೀಸಿದ ಭಾರತೀಯ ದಾಂಡೀಕರು ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 238 ರನ್ನುಗಳ ಬೃಹತ್ ಮೊತ್ತವನ್ನು ಕಲೆ ಹಾಕಿದರು ನಾಯಕ ಸೂರ್ಯಕುಮಾರ್ ಯಾದವ್ 32 ರನ್ ಗಳಿಸಿ ಅವಟಾದರೆ ಹಾರ್ದಿಕ್ ಪಾಂಡ್ಯ ಸ್ಪೋಟಕ 25 ರಂದುಗಳನ್ನು ಬಾರಿಸಿದರು ಇವರಿಬ್ಬರಿಗೂ ಜೊತೆಗೂಡಿ ಆಟವಾಡಿದ ಅಭಿಷೇಕ್ ಶರ್ಮ ಅಕ್ಷರಶಃ ಬಿರುಗಾಳಿಯ ರೀತಿ ಬ್ಯಾಟಿಂಗ್ ಮಾಡಿ ಕೇವಲ 35 ಎಸೆತಗಳಲ್ಲಿ ಐದು ಬೌಂಡರಿ 8 ಸಿಕ್ಸರ್ ಗಳ ನೆರವಿನಿಂದ 84 ರನ್ ಗಳಿಸಿ ಔಟಾದರು ಅಂತಿಮವಾಗಿ ಭಾರತ ತಂಡವು 238 ರನ್ನುಗಳ ಬೃಹತ್ ಮೊತ್ತವನ್ನು ಸೇರಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಪ್ರಾರಂಭಿಸಿದ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್ ಮನ್ ಗಳು ಪವರ್ ಪ್ಲೇನಲ್ಲಿ ಸ್ವಲ್ಪ ಹೆದರಿದಂತೆ ಕಂಡರೂ ನಂತರ ನಿಧಾನವಾಗಿ ಲಯ ಕಂಡುಕೊಳ್ಳುತ್ತಾ ಭಾರತದ ಬೌಲಿಂಗ್ ದಾಳಿಯನ್ನು ಎದುರಿಸಿದರು. ಆರಂಭಿಕ ಡಿವೈನ್ ಕಾನ್ವೆ ಶೂನ್ಯ ಕ್ಕೆ ಔಟಾದರೆ ರಚಿನ್ ರವೀಂದ್ರ ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಜೊತೆಯಾದ ಟಿಮ್ ರಾಬಿನ್ಸನ್ ಹಾಗೂ ಗ್ಲೆನ್ ಫಿಲಿಪ್ ಜೋಡಿಯು ಭಾರತದ ಬೌಲಿಂಗ್ ದಾಳಿಯನ್ನು ಮನಬಂದಂತೆ ದಂಡಿಸಿದರಾದರು ಪ್ರಯೋಜನವಾಗಲಿಲ್ಲ. ಗ್ಲೆನ್ ಫಿಲಿಪ್ ಅತ್ಯಂತ ಯಶಸ್ವಿ ಬ್ಯಾಟರಾಗಿ ಕೇವಲ 40 ಎಸೆತಗಳಲ್ಲಿ 78 ರನ್ನುಗಳನ್ನು ಗಳಿಸಿದರೆ. ಚಾಪ್ ಮನ್ ರವರು 24 ಎಸೆತಗಳಲ್ಲಿ 39 ರನ್ಗಳನ್ನು ಗಳಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ ನಿಗದಿತ 20 ಓವರುಗಳಲ್ಲಿ 190 ರನ್ಗಳನ್ನು ಗಳಿಸಿ 7ವಿಕೆಟ್ ಗಳನ್ನು ಕಳೆದುಕೊಂಡಿತ್ತು. ವಿಜಯಲಕ್ಷ್ಮಿ ಭಾರತಕ್ಕೆ ಒಲಿಯಿತು. ಅತ್ಯಂತ ಬಿಗುವಿನ ಬೌಲಿಂಗ್ ದಾಳಿಯನ್ನು ನಡೆಸಿದ ಭಾರತೀಯ ಬೌಲರ್ಗಳು ನ್ಯೂಜಿಲೆಂಡ್ ತಂಡಕ್ಕೆ ಯಾವುದೇ ಸಮಯದಲ್ಲೂ ಸಹ ಸವಾರಿ ಮಾಡಲು ಅವಕಾಶವನ್ನು ನೀಡಲಿಲ್ಲ.
7ನೇ ಬ್ಯಾಟರಾಗಿ ಕಣಕ್ಕಿಳಿದ ರಿಂಕು ಸಿಂಗ್ ನ್ಯೂಜಿಲೆಂಡ್ ಬೋಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು ಅವರು ಕೇವಲ 20 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ಒಳಗೊಂಡ 44 ರನ್ ಗಳನ್ನು ಸೇರಿಸಿ ನ್ಯೂಜಿಲೆಂಡ್ ಬೌಲರ್ ಗಳನ್ನ ಬೆಂಡೆತ್ತಿದರು. ಎಂದಿನಂತೆ ಆಕ್ರಮಣಕಾರಿ ಆಟ ಆಡಿದ ರಿಂಕು ಸಿಂಗ್ ಭಾರತದ ಮೊತ್ತವು 238 ರನ್ ಗಳನ್ನು ತಲುಪಲು ಅತ್ಯಂತ ಅಮೂಲ್ಯ ಕಾಣಿಕೆಯನ್ನು ನೀಡಿದರು
ಸಿಕ್ಕ ಅವಕಾಶವನ್ನು ಬಳಸಿಕೊಳ್ಳದೆ ಸಂಜು ಸ್ಯಾಮ್ಸಂಗ್ ಮತ್ತೊಮ್ಮೆ ವಿಫಲರಾದರು ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಆಯ್ಕೆಯಾಗಿದ್ದ ಇಶಾನ್ ಕಿಶನ್ ಕೂಡ ಕೇವಲ ಎಂಟು ರನ್ ಗಳಿಸಿ ಔಟ್ ಆದರು, ಶಿವಂ ದುಬೆ ಮತ್ತೊಮ್ಮೆ ವಿಫಲರಾದರೆ ಕಡೆಯಲ್ಲಿ ಬಂದ ಅಕ್ಷರ ಪಟೇಲ್ ಕೇವಲ ಐದು ರನ್ ಗಳಿಸಿ ಔಟ್ ಆದರು.
ಫೀಲ್ಡಿಂಗ್ ನಲ್ಲಿ ಅತ್ಯಂತ ಚಾಕು ಚಕ್ಯತೆಯನ್ನು ಮೆರೆದರೂ ಸಹ ಬೌಲಿಂಗ್ ನಲ್ಲಿ ಎಲ್ಲಾ ಬೌಲರ್ ಗಳು ಸಹ ಅತ್ಯಂತ ದುಬಾರಿಯಾದರು. ಜೆಕಬ್ ಡಫಿ ರವರು ನಾಲ್ಕು ಓವರ್ ಗಳಲ್ಲಿ 2 ವಿಕೇಟ್ ಪಡೆದುಕೊಂಡು 27ರನ್ ನೀಡಿದರೆ ಉಳಿದ ಎಲ್ಲಾ ಬೌಲರ್ ಗಳು ಅತ್ಯಂತ ದುಬಾರಿಯಾದರು.
ಮುಂದಿನ ಪಂದ್ಯಗಳಿಗೆ ಎರಡು ತಂಡಗಳಿಗೂ ಶುಭ ಹಾರೈಸುತ್ತ ಈ ಲೇಖನವನ್ನು ಮುಗಿಸೋಣ.